ಇಂದು ವಿಷ್ಣು ದಾದಾ ಪುಣ್ಯ ಸ್ಮರಣೆ ! ಬೆಂಗಳೂರು,ಡಿಸೆಂಬರ್,30,2020(..):ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ 11 ನೇ ಸ್ಮರಣೆ. ವಿಷ್ಣು ದಾದಾ ನೆನಪಿಗಾಗಿ ಅಭಿಮಾನಿಗಳು ರಕ್ತದಾನ, ಅನ್ನದಾನ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇಂದಿಗೆ ವಿಷ್ಣುವರ್ಧನ್ ಅಗಲಿ 11 ವರ್ಷಗಳಾಗಿದ್ದು, ಈ ಬಾರಿ ಕುಟುಂಬ ಸದಸ್ಯರು ಅವರ ಸ್ಮಾರಕ ನಿರ್ಮಾಣ ಸ್ಥಳದಲ್ಲೇ ಅಭಿಮಾನಿಗಳ ಜೊತೆ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಲಿದೆ. ಇತ್ತೀಚೆಗೆ ಅವರ ಪುತ್ಥಳಿ ಧ್ವಂಸ ಪ್ರಕರಣ, ತೆಲುಗು ನಟನ ಅವಹೇಳನಕಾರಿ ಹೇಳಿಕೆಯಿಂದಾಗಿ ಅಭಿಮಾನಿಗಳಿಗೆ ಬೇಸರವಾಗಿತ್ತು. ಈ ಕುರಿತು ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು.