ಧೋನಿ ಔತಣ ಕೂಟ: ಚಾಹಲ್​ ದಂಪತಿ ಫುಲ್ ಖುಷ್ ದುಬೈ, ಡಿಸೆಂಬರ್,30,2020(..):ಧನುಶ್ರೀ ಹಾಗೂ ಚಾಹಲ್​ ದಂಪತಿಗೆ ಧೋನಿ ಮತ್ತು ಸಾಕ್ಷಿ ಔತಣ ಕೂಟ ಏರ್ಪಡಿಸಿದ್ದರು. ಧೋನಿ ಭೇಟಿಯ ಚಿತ್ರಣವನ್ನು ಧನುಶ್ರೀ ಹಾಗೂ ಚಾಹಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆಧೋನಿಯನ್ನು ಭೇಟಿ ಮಾಡಿದ್ದು ನಿಜಕ್ಕೂ ತುಂಬಾ ಸಂತಸವಾಯಿತು ಎಂದು ಚಾಹಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದ್ಬುತ ಔತಣ ಕೂಟ ಎಂದು ಧನುಶ್ರೀ ಕೂಡ ಧೋನಿ ದಂಪತಿಯ ಆತ್ಮೀಯತೆಯನ್ನು ಕೊಂಡಾಡಿದ್ದಾರೆ.