ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್: ರಾಹುಲ್’ಗೆ ಚಾನ್ಸ್ ? ಮೆಲ್ಬೋರ್ನ್, ಡಿಸೆಂಬರ್,30,2020(..):ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂದಿನ ಟೆಸ್ಟ್ ನಲ್ಲಿ ಕೆ.ಎಲ್.ರಾಹುಲ್ ಗೆ ಸ್ಥಾನ ಸಿಗುವ ಸೂಚನೆ ಇದೆ. 2ನೇ ಪಂದ್ಯದಲ್ಲಿ ಗೆದ್ದ ಬಳಿಕ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ‍್ಯತೆಗಳಿವೆ.ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಮಯಾಂಕ್ ಅಗರ್ವಾಲ್ ಹೊರಹೋಗುವುದು ಬಹುತೇಕ ಖಚಿತವಾಗಿದೆ. ರೋಹಿತ್ ಶರ್ಮಾಗಾಗಿ ಮಯಾಂಕ್ ಹೊರ ನಡೆಯುವುದು ಅನಿವಾರ್ಯವಾಗಲಿದೆ. ಕೆಎಲ್ ರಾಹುಲ್ ರನ್ನು ಆಡಿಸದೇ ಇರುವುದಕ್ಕೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ತೀವ್ರ ಟೀಕೆ ಎದುರಿಸುತ್ತಿದೆ. ಹೀಗಾಗಿ ರಾಹುಲ್ ಮಧ‍್ಯಮ ಕ್ರಮಾಂಕಕ್ಕೆ ಆಯ್ಕೆ ಸಾಧ್ಯತೆ ಇದೆ.