ಕೊರೋನಾ ರೂಪಾಂತರ ಪತ್ತೆ ಹಿನ್ನೆಲೆ : ಸರ್ಕಾರ ಗಂಭೀರವಾಗಿ ಪರಿಗಣಿಸಲಿ – ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು,ಡಿಸೆಂಬರ್,29,2020(..) :ರಾಜ್ಯದಲ್ಲೂ ಮೂರು ಕೊರೋನಾ ರೂಪಾಂತರ ಪ್ರಕರಣಗಳ ಪತ್ತೆಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಹಿಂದಿನ ತಪ್ಪುಗಳು ಮತ್ತೆ ಆಗದಿರಲಿ. ಕೂಡಲೇ ಸೋಂಕಿತರ ಎಲ್ಲಾ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಿ, ಕ್ವಾರಂಟೈನ್ ಮಾಡಿ.ಮುಖ್ಯವಾಗಿ ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ಕೋವಿಡ್ ಪರೀಕ್ಷೆ ಮಾಡಿ, ನೆಗೆಟೀವ್ ಬಂದರಷ್ಟೆ ಪ್ರವೇಶ ಕೊಡಿ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ. : 3 -------.