ಜ.1ರಿಂದ ಶಾಲಾ-ಕಾಲೇಜು ಆರಂಭ ನಿಶ್ಚಿತ: ಕೊರೋನಾ ರೂಪಾಂತರ ಬಗ್ಗೆ ಆತಂಕಬೇಡ- ಡಿಸಿಎಂ ಅಶ್ವಥ್ ನಾರಾಯಣ್…. ಬೆಂಗಳೂರು,ಡಿಸೆಂಬರ್,29,2020(..):ಮಕ್ಕಳ ಭವಿಷ್ಯ ದೃಷ್ಠಿಯಿಂದ ಶಾಲೆ ಆರಂಭ ಅನಿವಾರ್ಯ. ಹೀಗಾಗಿ ಜನವರಿ 1 ರಿಂದ ಶಾಲಾ-ಕಾಲೇಜು ಆರಂಭ ನಿಶ್ಚಿತ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಜನವರಿ 1 ರಿಂದ ಶಾಲೆಗಳನ್ನ ಆರಂಭಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಜನವರಿ 1 ರಿಂದ ಶಾಲೆ ಆರಂಭವಾಗಲಿದ್ದು ಜೀವ ರಕ್ಷಣೆ ಜತೆ ವಿದ್ಯೆ ಕಲಿಸಬೇಕು. ಇನ್ನು ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು. ರೂಪಾಂತರ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ. ಇದು ಹೆಚ್ಚು ಪರಿಣಾಕಾರಿ ಅಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು. : -- – . 1- - .