ಬೆಂಗಳೂರಿನ ಮೂವರು ಸೇರಿ 6 ಮಂದಿಯಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆ… ಬೆಂಗಳೂರು,ಡಿಸೆಂಬರ್,29,2020(..):ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಕೊರೋನಾ ರೂಪಾಂತರ ಭಾರತಕ್ಕೆ ಕಾಲಿಟ್ಟಿದೆ. ಅಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಹೊಸ ಕೊರೋನಾ ಪ್ರಭೇದ ಪತ್ತೆಯಾಗಿದೆ. ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಪ್ರಕಟಣೆ ಹೊರಡಿಸಿದೆ. ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಹೈದರಾಬಾದ್ ನ ಇಬ್ಬರು, ಪುಣೆಯ ಒಬ್ಬರು ಹಾಗೂ ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ನ.25 ರಿಂದ ಡಿ.23 ವರೆಗೆ 33,000 ಪ್ರಯಾಣಿಕರು ಭಾರತದ ವಿವಿಧ ಏರ್ ಪೋರ್ಟ್ ಗಳಿಗೆ ಬ್ರಿಟನ್ ನಿಂದ ಅಗಮಿಸಿದ್ದರು. ಈ ಎಲ್ಲಾ ಪ್ರಯಾಣಿಕರನ್ನು ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿವೆ. 114 ಮಂದಿಯಲ್ಲಿ ಸಾಮಾನ್ಯ ಕೊರೋನಾ ಪ್ರಕರಣ ಪತ್ತೆಯಾಗಿದೆ. 6 , 3 , . 29, 2020 (..): . , , , . 33,000 25 23 . - . 114 .: / 3 : - – - -