ಹೊಸ ವರ್ಷಾಚರಣೆ ಹಿನ್ನೆಲೆ: ಎರಡು ದಿನಗಳ ಕಾಲ ಮಂಡ್ಯದ ಕೆಲ ಪ್ರವಾಸಿ ತಾಣಗಳಿಗೆ ನಿಷೇಧ… ಮಂಡ್ಯ,ಡಿಸೆಂಬರ್,28,2020(..): ಕೊರೋನಾ ಹಿನ್ನೆಲೆ ಈ ಬಾರಿ ಹೊಸ ವರ್ಷಾಚರಣೆ ಸರಳವಾಗಿ ಆಚರಿಸಲು ಸರ್ಕಾರ ಕರೆ ನೀಡಿದೆ. ಈ ಹಿನ್ನೆಲೆ ಜನವರಿ ಡಿಸೆಂಬರ್ 31 ಮತ್ತು ಜನವರಿ 1 ರಂದು ಮಂಡ್ಯದ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಹಿನ್ನೀರು, ಬಲಮುರಿ, ಎಡಮುರಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹಾಗೆಯೇ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೂ ಎರಡು ದಿನಗಳ ಕಾಲ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಆದೇಶಿಸಿದ್ದಾರೆ ಎನ್ನಲಾಗಿದೆ. : - - - - –