ಚಾಮುಂಡಿ ಬೆಟ್ಟದ ಬಳಿ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ…. ಮೈಸೂರು,ಡಿಸೆಂಬರ್,28,2020(..):ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿಯಾದ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ. ಮಧ್ಯರಾತ್ರಿ ವೇಳೆ ದೇವಿಕೆರೆ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ದೇವಿಕೆರೆ ಕ್ರಾಸ್ ಬಳಿ ಚಿರತೆ ರಸ್ತದಾಟುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಿರತೆಯ ಸೊಂಟ ಮುರಿದಿದ್ದು ಚಿರತೆ ಗಂಭೀರ ಗಾಯಗೊಂಡಿದೆ. ಮೇಲೇಳಲಾಗದೆ ಚಿರತೆ ನರಳುತ್ತಿದ್ದು, ಸ್ಥಳದಲ್ಲಿ ಜನ‌ ಜಮಾಯಿಸಿದ್ದರಿಂದ ಚಿರತೆ ಬೆದರಿ ತೆವಳುತ್ತಾ ಪೊದೆ ಸೇರಿಕೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಚಿರತೆ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. : – –-- -