‘ಹನುಮ ಹುಟ್ಟಿದ್ದು ಗೊತ್ತಾ’ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದು ಹೀಗೆ… ಚಿಕ್ಕಮಗಳೂರು,ಡಿಸೆಂಬರ್,28,2020(..):ನಿನ್ನೆ ಹನುಮ ಜಯಂತಿ ದಿನ ಚಿಕನ್ ತಿನ್ನುವ ವೇಳೆ ಬೆಂಬಲಿಗನೋರ್ವ ಕೇಳಿದ ಪ್ರಶ್ನೆಗೆ ಹನುಮ ಹುಟ್ಟಿದ್ದು ಗೊತ್ತಾ..? ಎಂದಿದ್ಧ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ. ತಾಯಿ ‘ಇವರೇ ನಿಮ್ಮ ತಂದೆ’ ಎಂದರೆ ನಂಬುತ್ತಾರೆ ಸಾಕ್ಷಿ ಕೇಳುವುದಿಲ್ಲ. ಆದರೆ ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನೂ ಇರುತ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅವರ ದೋಷ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಿದ್ಧರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ನಂಬಿಕೆ ಎಲ್ಲವನ್ನೂ ಮೀರಿದ್ದು. ಜಗತ್ತು ನಂಬಿಕೆಗಳ ಮೇಲೆ ಇರುವುದು. ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು. ಆದರೆ ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತವ ಕಾಣುವುದಿಲ್ಲ. ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ದರೆ ಅದು ಅವರ ದೋಷ ಎಂದು ಕಿಡಿಕಾರಿದರು. ಸಿದ್ದರಾಮಯ್ಯನವರ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ ಸಹವಾಸ ದೋಷದಿಂದ ಬಂದಿರುವುದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವು ಕಾರಣಕ್ಕೆ ಅವರಿಗೆ ದೇವರ ಹೆಸರು ಇಟ್ಟರು. ಆದರೆ ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ ಎಂದು ಸಿದ್ಧರಾಮಯ್ಯಗೆ ಸಿ.ಟಿ ರವಿ ಟಾಂಗ್ ನೀಡಿದರು. ….. .. ’ , . 28, 2020 (..): - , ‘ ,’ -, . ’ , .. , “ ’ ‘ ’, . .”“ . . ’ , . . ’ ’ . . ,” .: / / .. / : - – ’ - - .