ಬೆಂಗಳೂರು ಏರ್​ಪೋರ್ಟ್​ ರಸ್ತೆಯಲ್ಲಿ ಸರಣಿ ಅಪಘಾತ…! ಬೆಂಗಳೂರು,ಡಿಸೆಂಬರ್,27,2020(..): ಮುಂಜಾನೆಯೇ ಬೆಂಗಳೂರಿನ ಏರ್​ಪೋರ್ಟ್​ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಐದು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ. ಏರ್​ಪೋರ್ಟ್​ ರಸ್ತೆಯಲ್ಲಿ ಬಂದ ಸ್ವಿಫ್ಟ್​​​ ಕಾರು ಡಿವೈಡರ್​ ಹಾರಿ ಏರ್​​ಪೋರ್ಟ್​​ ಕಡೆ ಹೊರಟಿದ್ದ ನಿಸಾನ್​​​ ಕಾರಿಗೆ ಡಿಕ್ಕಿ ಹೊಡೆದಿದೆ. ಜೊತೆಗೆ ಇಂಡಿಕಾ ಅಲ್ಟೋ ಸೇರಿ ಮೂರು ಕಾರುಗಳಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ. ಜೊತೆಗೆ ಇಂಡಿಕಾ ಕಾರು ಚಾಲಕನೂ ಸಹ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಟ್ರಾಫಿಕ್​ ಪೊಲೀಸರು ಆಗಮಿಸಿದ್ದು, ಏರ್ಪೋರ್ಟ್ ರಸ್ತೆ ಬ್ಯಾಟರಾಯನಪುರ ಫ್ಲೈಓವರ್ ಮೇಲೆ ಈ ಅಪಘಾತ ನಡೆದಿದೆ. ಹೀಗಾಗಿ, ಏರ್​​ಪೋರ್ಟ್​​​ ಕಡೆ ಹೋಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತದಲ್ಲಿ ಒಟ್ಟು 9 ಜನರಿಗೆ ಗಾಯಗಳಾಗಿವೆ. ಪೊಲೀಸರು ಅಪಘಾತದಲ್ಲಿ ಜಖಂಗೊಂಡ ಕಾರುಗಳ ತೆರವು ಮಾಡಿ, ಟ್ರಾಫಿಕ್​ ಕ್ಲಿಯರ್ ಮಾಡಲು ಹರಸಾಹಸ ಪಟ್ಟರು. ಐದು ಕಾರುಗಳಲ್ಲಿದ್ದ 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. : ---