ಸಂಜೆ 5 ಗಂಟೆ ವೇಳೆಗೆ ಶೇ 63.90ರಷ್ಟು ಮತದಾನ: ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ವೋಟಿಂಗ್: 14 ಕ್ಷೇತ್ರಗಳ ವಿವರ ಹೀಗಿದೆ. ಬೆಂಗಳೂರು,ಏಪ್ರಿಲ್,26,2024 (..):ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಸಂಜೆಯಾಗುತ್ತಲೇ ಮತದಾನ ಬಿರುಸುಗೊಂಡಿದೆ. ಈ ನಡುವೆ ಸಂಜೆ 5 ಗಂಟೆವರೆಗೆ ಶೇಕಡಾ 63.90ರಷ್ಟು ಮತದಾನವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಶೇ 74.87ರಷ್ಟು ವೋಟಿಂಗ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 5 ಗಂಟೆವರೆಗೆ ಶೇ 63.90ರಷ್ಟು ಮತದಾನ ಬೆಂಗಳೂರು ಸೆಂಟ್ರಲ್ –ಶೇ 48.61ರಷ್ಟು ಮತದಾನ ಬೆಂಗಳೂರು ಉತ್ತರ – ಶೇ 50.04ರಷ್ಟು ಮತದಾನ ಬೆಂಗಳೂರು ಗ್ರಾಮಾಂತರ – ಶೇ 61.78ರಷ್ಟು ಮತದಾನ ಬೆಂಗಳೂರು ದಕ್ಷಿಣ – ಶೇ 49.37ರಷ್ಟು ಮತದಾನ ಚಾಮರಾಜನಗರ –ಶೇ 69.60ರಷ್ಟು ಮತದಾನ ಚಿಕ್ಕಬಳ್ಳಾಪುರ – ಶೇ 70.97ರಷ್ಟು ಮತದಾನ ಚಿತ್ರದುರ್ಗ – ಶೇ 67ರಷ್ಟು ಮತದಾನ ದಕ್ಷಿಣ ಕನ್ನಡ – ಶೇ 71.83ರಷ್ಟು ಮತದಾನ ಹಾಸನ – ಶೇ 72.13ರಷ್ಟು ಮತದಾನ ಕೋಲಾರ –ಶೇ 71.26ರಷ್ಟು ಮತದಾನ ಮಂಡ್ಯ – ಶೇ 74.87ರಷ್ಟು ಮತದಾನ ಮೈಸೂರು-ಕೊಡಗು – ಶೇ 65.85ರಷ್ಟು ಮತದಾನ ತುಮಕೂರು – ಶೇ 72.10ರಷ್ಟು ಮತದಾನ ಉಡುಪಿ-ಚಿಕ್ಕಮಗಳೂರು – ಶೇ 72.13ರಷ್ಟು ಮತದಾನ : , , ,