ಮೈಸೂರು ರೈಲ್ವೆ ನಿಲ್ದಾಣ ಮತ್ತು ಪಿಟ್ ಲೈನ್ : ಅಜಯ್ ಕುಮಾರ್ ಸಿಂಗ್ ಪರಿಶೀಲನೆ…! ಮೈಸೂರು,ಡಿಸೆಂಬರ್,26,2020(..): ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಮೈಸೂರು ಹಾಗು ಚಾಮರಾಜಪುರಂ ರೈಲ್ವೆ ನಿಲ್ದಾಣಗಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ರೈಲು-ಬಳಕೆದಾರರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಸ್ಥಾಪಿಸಲಾದ ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯನ್ನು(ಪಿ.ಆರ್.ಎಸ್.) ನಿಯೋಜಿಸಲಾಯಿತು. ಚಾಮರಾಜಪುರಂ ರೈಲ್ವೆ ನಿಲ್ದಾಣದ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯು ವಾರದ ದಿನಗಳಲ್ಲಿ (ಭಾನುವಾರ ಹೊರತುಪಡಿಸಿ) 10ರಿಂದ 12ರವರೆಗೆ ಮತ್ತು 3ರಿಂದ 6 ರವರೆಗೆ ಹಾಗು ಭಾನುವಾರ ಬೆಳಗ್ಗೆ 10ರಿಂದ 12ರವರೆಗೆ ಕಾರ್ಯನಿರ್ವಹಿಸುತ್ತದೆ.ಮೈಸೂರಿನಿಂದ ಪ್ರಯಾಣಿಕರ ಸೇವೆಗಳನ್ನು ಕ್ರಮೇಣ ಪುನರಾರಂಭಿಸಿದ ನಂತರ ಎ.ಕೆ.ಸಿಂಗ್ ಅವರು ಮೈಸೂರು ರೈಲ್ವೆ ನಿಲ್ದಾಣ ಮತ್ತು ಪಿಟ್ ಲೈನ್ ಗಳನ್ನು ಪರಿಶೀಲಿಸಿದರು. ಪರಶೀಲನೆ ವೇಳೆ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. : ---- - …