ವಿಷ್ಣುವರ್ಧನ್ ಪ್ರತಿಮೆ ಧ್ವಂಸ : ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳಿಂದ ಪ್ರತಿಭಟನೆ ಮೈಸೂರು,ಡಿಸೆಂಬರ್,26,2020(..): ಬೆಂಗಳೂರಿನಲ್ಲಿ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವoಸ ಹಿನ್ನೆಲೆ ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಜಗನ್ಮೋಹನ ಅರಮನೆ ಮುಂಭಾಗ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ವಿಷ್ಣು ಅಭಿಮಾನಿಗಳು ಆಕ್ರೋಶವ್ಯಕ್ತಪಡಿಸಿದರು. ವಿಷ್ಣುವರ್ಧನ್ ಅಭಿಮಾನಿ ಪಾರ್ಥಸಾರಥಿ ಮಾತನಾಡಿ, ಪದೇ ಪದೇ ವಿಷ್ಣುವರ್ಧನ್ ವಿಚಾರದಲ್ಲಿ ನೋವುಂಟು ಮಾಡುತ್ತಿರುವುದು ಸರಿಯಲ್ಲ. ಪುತ್ಥಳಿ ಸ್ಥಳಾಂತರಿಸಬಹುದಿತ್ತು ಬದಲಾಗಿ ಈ ರೀತಿಯ ಕೃತ್ಯ ಎಸಗಬಾರದಿತ್ತು ಎಂದು ಕಿಡಿಕಾರಿದ್ದಾರೆ.ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಷ್ಣು ಪುತ್ಥಳಿಗಳಿಗೆ ಭದ್ರತೆ ಕೊಡಬೇಕು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ವಿಷ್ಣು ಪ್ರತಿಮೆಗೆ ರಕ್ಷಣೆ ನೀಡಿ ಈ ರೀತಿಯ ಕೃತ್ಯಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. : -------