ನಾಳೆ 2 ನೇ ಹಂತದ ಗ್ರಾ.ಪಂ ಚುನಾವಣೆ ಮತದಾನ: ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಆರಂಭ…. ಮೈಸೂರು,ಡಿಸೆಂಬರ್,26,2020(..):ಈಗಾಗಲೇ ಗ್ರಾಮಪಂಚಾಯಿತಿ ಮೊದಲ ಹಂತದ ಚುನಾವಣೆ ಮತದಾನ ಡಿಸೆಂಬರ್ 22 ರಂದು ನಡೆದಿದ್ದು ಇದೀಗ ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಎರಡನೇ ಹಂತದ ಮತದಾನ ನಡೆಯಲಿದ್ದು ಮೈಸೂರಿನ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಮೈಸೂರು ತಾಲೂಕಿಗೆ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಸಲಾಗುತ್ತಿದೆ. ಮೈಸೂರು ತಾಲೂಕಿನಲ್ಲಿ ಒಟ್ಟು 23 ಗ್ರಾಮಪಂಚಾಯತಿಗೆ ಚುನಾವಣೆ ನಡೆಯಲಿದ್ದು, 237 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಇನ್ನು ಚುನಾವಣೆ ಕರ್ತವ್ಯಕ್ಕೆ ಹಾಜರಾಗಿರುವ ಚುನಾವಣಾ ಸಿಬ್ನಂದಿ ಮಸ್ಟರಿಂಗ್ ಕೇಂದ್ರದತ್ತ ಆಗಮಿಸಿದ್ದಾರೆ. ಕೋವಿಡ್ ಮುಂಜಾಗ್ರಾತಾ ಕ್ರಮದೊಂದಿಗೆ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು ಚುನಾವಣೆ ಸಿಬ್ಬಂದಿಯನ್ನು ಕರೆದೊಯ್ಯಲು ಮಸ್ಟರಿಂಗ್ ಕೇಂದ್ರಲ್ಲಿ ರಾಜ್ಯ ಸಾರಿಗೆ ಬಸ್ ಗಳು ಸಿದ್ದವಾಗಿವೆ. ಚುನಾವಣಾ ಕರ್ವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಅಂತಿಮ ತರಬೇತಿ ನೀಡಲಾಗುತ್ತಿದೆ. : – 2nd – - - - – . – : , . 26, 2020 (..): , 22. , . . 23 . 237 . -19 .: / / 23