ಮಾಸ್ಟರ್’ಗೆ ಯು/ಎ ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಮಂಡಳಿ ಬೆಂಗಳೂರು, ಡಿಸೆಂಬರ್ 26, 2020 (..):ಮಾಸ್ಟರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಹೌದು. ಚಿತ್ರತಂಡ ಸೆನ್ಸಾರ್ ಆಗಿರುವುದನ್ನು ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಿದೆ. ಅಂದಹಾಗೆ ನಟ ವಿಜಯ್ ಹಾಗೂ ನಟ ವಿಜಯ್ ಸೇತುಪತಿ ಪ್ರಪ್ರಥಮಬಾರಿಗೆ ಜೊತೆಯಾಗಿ ನಟಿಸಿದ ಬಹುನಿರೀಕ್ಷೆಯ ಚಿತ್ರ ಮಾಸ್ಟರ್. ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಬೇಕಿದ್ದ ಚಿತ್ರ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತು. ಇದೀಗ ಚಿತ್ರ ಮುಂದಿನ ತಿಂಗಳು ಪೊಂಗಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಬಹುನಿರೀಕ್ಷೆಯ ಚಿತ್ರ ಮಾಸ್ಟರ್ ಗಾಗಿ ಅಭಿಮಾನಿಗಳು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.