ವೈಕುಂಠ ಏಕಾದಶಿ ಹಿನ್ನೆಲೆ: ಕೈಲಾಸ ವೈಕುಂಠ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ… ಬೆಂಗಳೂರು,ಡಿಸೆಂಬರ್,25,2020(..):ಇಂದು ವೈಕುಂಠ ಏಕಾದಶಿ ಹಿನ್ನೆಲೆ ಮಾಜಿ ಸಿಎಂ ಸಿದ್ಧರಾಮಯ್ಯ ಬೆಂಗಳೂರಿನ ರಾಜಾಜಿನಗರದ ಕೈಲಾಸ ವೈಕುಂಠ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ರಂಗನಾಥನ ದರ್ಶನ ಪಡೆದರು. ಈ ವೇಳೆ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಗೂ ಬೆಂಬಲಿಗರು ಸಿದ್ಧರಾಮಯ್ಯಗೆ ಸಾಥ್ ನೀಡಿದರು. : - - - .