ಸಾಮರಸ್ಯ, ಹೊಂದಾಣಿಕೆ, ಆರೋಗ್ಯದ ಹಿತ : ಗ್ರಾಪಂ ಚುನಾವಣೆ 6 ಮಂದಿ ಅವಿರೋಧ ಆಯ್ಕೆ…! ಮೈಸೂರು,ಡಿಸೆಂಬರ್,25,2020(..) :ಗ್ರಾಮದಲ್ಲಿ ಸಾಮರಸ್ಯ, ಹೊಂದಾಣಿಕೆ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಪಂ ಚುನಾವಣೆಯಲ್ಲಿ 6 ಮಂದಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಟಿ.ನರಸೀಪುರ ತಾಲೂಕಿನ ಹೆಗ್ಗುರೂ ಗ್ರಾ.ಪಂ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಅವಿರೋಧ ಆಯ್ಕೆಮಾಡಲಾಗಿದೆ. ಜಿಲ್ಲೆಯ ಮಾದರಿ ಗ್ರಾಮ ಎನಿಸಿಕೊಂಡ ಬಸವನಹಳ್ಳಿ. ಕೊರೊನದಿಂದ ಅರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಹಿನ್ನೆಲೆ. ಗ್ರಾಮಸ್ಥರಿಂದ ಒಕ್ಕೊರಲಿನಿಂದ ಅವಿರೋಧ ಆಯ್ಕೆ ಮಾಡಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಗ್ರಾಮದ 6 ಮಂದಿ ಸದಸ್ಯರು. ಚುನಾವಣೆಗಿಂತ ಜನರ ಆರೋಗ್ಯ ಮುಖ್ಯ ಎಂದಿದ್ದಾರೆ. ಬಸವನಹಳ್ಳಿಯಲ್ಲಿ 2 ವಾರ್ಡ್ ಗೆ ನಡೆಯಬೇಕಿದ್ದ ಚುನಾವಣೆಯಲ್ಲಿ ಪ್ರತಿ ವಾರ್ಡ್ ಗೂ 3 ಮಂದಿ ಆಯ್ಕೆಗೆ ನಡೆಯಬೇಕಿತ್ತು. ಅದರಂತೆ, 6 ಮಂದಿ ಪೈಕಿ 3 ಮಹಿಳೆಯರು ಅವಿರೋಧ ಆಯ್ಕೆಯಾಗಿದ್ದಾರೆ. : ------6 --!