ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ.. ಮೈಸೂರು,ಡಿಸೆಂಬರ್,25,2020(..) :ಕೆ.ಆರ್.ನಗರ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.1 ತಿಂಗಳ ಕಾಲ ನಡೆಯುತ್ತಿದ್ದ ಇತಿಹಾಸ ಪ್ರಸಿದ್ಧ ರಾಮದೇವರ ದನಗಳ ಜಾತ್ರೆ ಸೇರಿದಂತೆ ಜನವರಿ 1 ರಿಂದ 31 ರವರೆಗೆ ನಡೆಯಬೇಕಿದ್ದ ಪ್ರಸಿದ್ಧ ದನಗಳ ಜಾತ್ರೆ ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿಯೇ ವಿಶೇಷ ಪ್ರಸಿದ್ಧಿ ಪಡೆದಿದ್ದ ಚುಂಚನಕಟ್ಟೆ ದನಗಳ ಜಾತ್ರೆ. ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತವು ಜಾತ್ರಾ ಮಹೋತ್ಸವಕ್ಕೆ ನಿರ್ಬಂಧ ವಿಧಿಸಿದೆ.ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಚುಂಚನಕಟ್ಟೆ ದೇವಾಲಯಕ್ಕೆ ಜನವರಿ 15ರಂದು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತವು ನಿರ್ಬಂಧ ಹೇರಿದ್ದು, ದೇವಾಲಯದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗಷ್ಟೆ ಅವಕಾಶ ಕಲ್ಪಿಸಲಾಗಿದೆ. … , . 25, 2020 (..): .. ’ . . . , . .: / / .. / : ------ -