ಬೀದಿಬದಿ ವ್ಯಾಪಾರಿಗಳಿಂದ ವಸೂಲಿ : ಎಎಸ್ಐ, ಕಾನ್ ಸ್ಟೇಬಲ್ ಅಮಾನತು…! ಮೈಸೂರು,ಡಿಸೆಂಬರ್,24,2020(..) :ಮೈಸೂರಿನಲ್ಲಿ ಪೊಲೀಸರ ರಾಜಾರೋಷವಾಗಿ ಮಾಮೂಲಿ ವಸೂಲಿ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಎಎಸ್ಐ ಕುಮಾರಸ್ವಾಮಿ ಹಾಗೂ ಕಾನ್ ಸ್ಟೇಬಲ್ ಮಣಿಕಂಠ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸರು ಗಾಂಧಿ ವೃತ್ತದ ಬಳಿ ಪೊಲೀಸ್ ಕಾರಿನಲ್ಲಿ ಕುಳಿತು ಬೀದಿ ಬದಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದರು. ಈ ದೃಶ್ಯಗಳನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ತುಣುಕು ಆಧರಿಸಿ ಕಮಿಷನರ್ ಚಂದ್ರಗುಪ್ತ ಇಬ್ಬರನ್ನು ಅಮಾನತುಗೊಳಿಸಿ ಇಲಾಖೆ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. :-- ---