ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕೆ ಹೆಚ್ಚು ಭಕ್ತರು ಬರಲು ಅವಕಾಶ ಕೊಡಲ್ಲ-ಡಿಸಿ ರೋಹಿಣಿ ಸಿಂಧೂರಿ…. ಮೈಸೂರು,ಡಿಸೆಂಬರ್,24,2020(..):ಕೊರೋನಾ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಅಂತ ಚಾಮುಂಡಿ ಬೆಟ್ಟಕ್ಕೆ ಹೆಚ್ಚು ಭಕ್ತರು ಬರಲು ಅವಕಾಶ ಕೊಡಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ವೈಕುಂಠ ಏಕಾದಶಿ ಸಂದರ್ಭದಲ್ಲೂ ಸರ್ಕಾರದ ಕೊರೋನಾ ಗೈಡ್‌ ಲೈನ್ ಅನ್ವಯ ಆಗುತ್ತೆ. ಆದರೆ ದೇವಾಲಯಗಳನ್ನು ಮುಚ್ಚುವಂತೆ ಆದೇಶ ಮಾಡಲು ಸಾಧ್ಯವಿಲ್ಲ. ಇನ್ನು ಅರಮನೆ ಮುಂಭಾಗ ಕೂಡ ಸಂಭ್ರಮಾಚರಣೆ ಇರುವುದಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು. : - - - – – - .