3 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ 50.93 ರಷ್ಟು ಮತದಾನ: ಕ್ಷೇತ್ರವಾರು ಪ್ರಮಾಣ ಹೀಗಿದೆ.. ಬೆಂಗಳೂರು,ಏಪ್ರಿಲ್,26,2024 (..):ಇಂದು ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಹಿನ್ನೆಲೆ ಬಿರು ಬಿಸಿಲಿನಲ್ಲೂ ಮತದಾರರು ಮತಗಟ್ಟೆಯತ್ತ ಧಾವಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದು ಮಧ್ಯಾಹ್ನ 3 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ 50.93ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು ಶೇ 58.76ರಷ್ಟು ವೋಟಿಂಗ್ ನಡೆದಿದೆ. 3 ಗಂಟೆ ವೇಳೆಗೆ 14 ಲೋಕಸಭಾ ಕ್ಷೇತ್ರಗಳಲ್ಲಾದ ಮತದಾನ ಪ್ರಮಾಣ ಹೀಗಿದೆ ನೋಡಿ… ಮಧ್ಯಾಹ್ನ 3ಗಂಟೆಗೆ ರಾಜ್ಯದಲ್ಲಿ ಶೇ 50.93ರಷ್ಟು ಮತದಾನ ಬೆಂಗಳೂರು ಗ್ರಾಮಾಂತರ- 49.62% ಬೆಂಗಳೂರು ಸೆಂಟ್ರಲ್- 40.10% ಬೆಂಗಳೂರು ಉತ್ತರ – 41.12% ಬೆಂಗಳೂರು ದಕ್ಷಿಣ – 40.77% ಚಾಮರಾಜನಗರ- 54.82% ಚಿಕ್ಕಬಳ್ಳಾಪುರ – 55.90% ಚಿತ್ರದುರ್ಗ- 52.14% ದಕ್ಷಿಣ ಕನ್ನಡ- 58.76% ಹಾಸನ- 55.92% ಕೋಲಾರ- 54.66% ಮಂಡ್ಯ- 57.44% ಮೈಸೂರು-ಕೊಡಗು- 53.55% ತುಮಕೂರು – 56.62% ಉಡುಪಿ ಚಿಕ್ಕಮಗಳೂರು- 57.49% : 50.93 - – – 3