ಮಧ್ಯಾಹ್ನದ ವೇಳೆಗೆ ಶೇ 38.23ರಷ್ಟು ಮತದಾನ: 14 ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣವೆಷ್ಟು ಇಲ್ಲಿದೆ ಮಾಹಿತಿ. ಬೆಂಗಳೂರು,ಏಪ್ರಿಲ್,26,2024 (..):ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಣ ರಂಗೇರಿದ್ದು ಇಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಮಧ್ಯಾಹ್ನ 1ಗಂಟೆ ವೇಳೆಗೆ ಶೇ 38. 23ರಷ್ಟು ಮತದಾನವಾಗಿದೆ. 14 ಕ್ಷೇತ್ರಗಳಲ್ಲಿ 1 ಗಂಟೆ ವೇಳೆಗೆ ಆಗಿರುವ ಮತದಾನ ಪ್ರಮಾಣ ಈ ಕೆಳಕಂಡಂತಿದೆ. ಬೆಂಗಳೂರು ಸೆಂಟ್ರಲ್- 30 .10% ಬೆಂಗಳೂರು ಉತ್ತರ- 32.25 % ಬೆಂಗಳೂರು ಗ್ರಾಮಾಂತರ- 36.9% ಬೆಂಗಳೂರು ದಕ್ಷಿಣ- 31.51% ಚಾಮರಾಜನಗರ – 39 57% ಚಿಕ್ಕಬಳ್ಳಾಪುರ- 39.85% ಚಿತ್ರದುರ್ಗ – 39.05% ದಕ್ಷಿಣ ಕನ್ನಡ- 48.10% ಹಾಸನ- 40.99% ಕೋಲಾರ – 38.42% ಮೈಸೂರು ಕೊಡಗು- 41.58% ಮಂಡ್ಯ- 40.70% ತುಮಕೂರು- 41.91% ಉಡುಪಿ ಚಿಕ್ಕಮಗಳೂರು- 46.43% : , 38.23 ,