ಮಹಾತ್ಮ ಗಾಂಧೀಜಿ ಅವರದು ವಿಶ್ವದ ದಂತಕಥೆಯಂಥ ವ್ಯಕ್ತಿತ್ವ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು,ಡಿಸೆಂಬರ್,23,2020(..) :ಮಹಾತ್ಮ ಗಾಂಧೀಜಿ ಅವರದು ವಿಶ್ವದ ದಂತಕಥೆ ವ್ಯಕ್ತಿತ್ವವಾಗಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರ ಸೇರಿದಂತೆ ಆಧ್ಯಾತ್ಮಿಕತೆ, ದಾರ್ಶನಿಕತೆ ಈ ಎಲ್ಲ ಕ್ಷೇತ್ರಗಳ ಮೇಲೂ ಗಾಢ ಪ್ರಭಾವ ಬೀರಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಬುಧವಾರ ಆಯೋಜಿಸಿದ್ದ ‘’ಭಾರತದಲ್ಲಿ ಗಾಂಧಿ ಮತ್ತು ಅವರ ಸಮಕಾಲೀನರು’’ ವಿಷಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ್ ಗೆ ಚಾಲನೆ ನೀಡಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿದರು. ವಿಶ್ವದಲ್ಲಿ ಗಾಂಧೀಜಿ ಅವರು ಬೀರಿರುವ ಪ್ರಭಾವ ಪ್ರೇರಣೆ ಅನನ್ಯವಾಗಿದೆ. ಅಪರೂಪದ ಒಳನೋಟದ ಚಿಂತನೆ ಅವರದ್ದಾಗಿತ್ತು. 20ನೇ ಶತಮಾನದಲ್ಲಿ ಅಹಿಂಸೆಯಂತಹ ಅಸ್ತ್ರ ಬಳಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಲ್ಲದೆ, ವಿಶ್ವದಲ್ಲಿ ಶಾಂತಿ ನೆಲೆಸಲು ಸೌಹಾರ್ದತೆ ನೆಲೆಸಲು ಅಹಿಂಸೆಯ ಅಸ್ತ್ರದ ಮೂಲಕ ವಿಶ್ವದ ಮನಗೆದ್ದಿದ್ದಾರೆ ಎಂದು ಸ್ಮರಿಸಿದರು.ಪ್ರೀತಿಯೊಂದೆ ಮಾನವರೆಲ್ಲರನ್ನು ಕೂಡಿಸಬಲ್ಲದು ಎಂದು ತಿಳಿಸಿದರು. ನನ್ನ ಜೀವನವೇ ನನ್ನ ಸಂದೇಶ ಎಂದು ಸರಳವಾಗಿ ಬದುಕಿ ವಿಶ್ವಕ್ಕೆ ಮಾದರಿಯಾದರು. ಇಂತಹ ಸರಳ ಬದುಕಿನ ಶ್ರೀಮಂತ ಚಿಂತನೆಯ ಧೀಮಂತ ವ್ಯಕ್ತಿತ್ವ ಗಾಂಧೀಜಿಯವರದ್ದಾಗಿದೆ ಎಂದರು. ಮನುಷ್ಯತ್ವದ ದಾರಿಯಲ್ಲಿ ಗಾಂಧೀಜಿಯವರು ನಡೆಸಿದ ಪ್ರಯೋಗಗಳು, ಕಂಡುಕೊಂಡ ಸತ್ಯ ಮತ್ತು ಅಹಿಂಸಾ ಮಾರ್ಗ ಜಾಗತಿಕ ಇತಿಹಾಸದ ಉಜ್ವಲ ಮಾದರಿಗಳಾಗಿವೆ. ಈ ದೃಷ್ಟಿಯಿಂದ ಗಾಂಧೀಜಿಯವರ ಪ್ರಭಾವಕ್ಕೆ ಸಮಾಜದ ಎಲ್ಲ ಹಿನ್ನೆಲೆಯವರು ಒಳಗಾಗಿದ್ದಾರೆ. ಸಾಹಿತಿಗಳು, ರಾಜಕಾರಣಿಗಳು, ಸಮಾಜ ಸುಧಾರಕರು, ಹೋರಾಟಗಾರರು, ವಿಜ್ಞಾನಿಗಳು ಹಾಗೂ ಹಿರಿಕಿರಿಯ ವಯಸ್ಸಿನ ಎಲ್ಲ ತಲೆಮಾರಿನವರು ಸೇರಿದ್ದಾರೆ ಎಂದು ಹೇಳಿದರು. ಗಾಂಧೀಜಿಯವರ ವಿಚಾರಧಾರೆಗಳನ್ನು ಇನ್ನಷ್ಟು ಅರಿಯುವ ಹಾಗೂ ಗಾಂಧೀಜಿಯವರ ವಿಚಾರಧಾರೆಗಳನ್ನು ಪಸರಿಸುವ ದೃಷ್ಟಿಯಿಂದ ಮೈಸೂರು ವಿವಿ ಗಾಂಧಿ ಭವನವು ಹಲವಾರು ವಿಚಾರಗೋಷ್ಠಿಗಳನ್ನು ವಿಶೇಷ ಉಪನ್ಯಾಸಗಳನ್ನು, ಸಂವಾದಗಳನ್ನು ಏರ್ಪಡಿಸುತ್ತ ಕ್ರಿಯಾಶೀಲವಾಗಿ ಕಾರ್ಯನಿರತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಎರಡು ದಿನದ ವೆಬಿನಾರ್ ನಲ್ಲಿ ಗಾಂಧೀಜಿಯವರ ಸಮಕಾಲೀನರು ಸಂವಿಧಾನ ಶಿಲ್ಪಿಗಳು ಆಗಿರುವ ಡಾ.ಬಿ.ಆರ್.ಅಂಬೇಡ್ಕರ್, ಪ್ರಸಿದ್ದ ಸಮಾಜವಾದಿ ಚಿಂತಕರಾಗಿದ್ದ ಡಾ.ರಾಮ್ ಮನೋಹರ ಲೋಹಿಯಾ, ಪಂಡಿತ್ ಜವಹಾರ್ ಲಾಲ್ ನೆಹರು, ಸರ್ದಾರ್ ವಲ್ಲಬಾಯ್ ಪಟೇಲ್, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ರವೀಂದ್ರನಾಥ ಠಾಗೂರ್, ನಾರಾಯಣಗುರು, ಸಿ.ರಾಜಗೋಪಾಲಚಾರಿ(ರಾಜಾಜಿ), ಹರ್ಡೀಕರ್ ಮಂಜಪ್ಪ, ಸಿದ್ದನವಳ್ಳಿ ಕೃಷ್ಣಶರ್ಮ, ಕಸ್ತೂರಬಾ ಗಾಂಧಿ, ಸುಭಾಶ್ ಚಂದ್ರಬೋಸ್, ಮೌಲಾನ ಆಝಾದ್, ಮಹದೇವದೇಸಾಯಿ ಮುಂತಾದ ಗಾಂಧೀಜಿಯವರ ಒಡನಾಡಿಗಳನ್ನು ಕುರಿತು ಆಯೋಜಿಸಿರುವ ಎರಡು ದಿನದ ರಾಷ್ಟ್ರಮಟ್ಟದ ವೆಬಿನಾರ್ ಮಹತ್ವದ್ದಾಗಿದೆ ಎಂದರು. ಎರಡು ದಿನದ ವೆಬಿನಾರ್ ನಲ್ಲಿ ದೆಹಲಿ, ಗುಜರಾತ್, ಆಂದ್ರಪ್ರದೇಶ, ಬೆಂಗಳೂರು ಮುಂತಾದ ಕಡೆಯಿಂದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಪ್ರಬಂಧ ಮಂಡಿಸಲಿದ್ದಾರೆ. ಜೆಎನ್ ಯು ದೆಹಲಿ, ಸೆಂಟರಲ್ ಯುನಿವರ್ಸಿಟಿ ಆಫ್ ಗುಜರಾತ್, ದೆಹಲಿ ವಿವಿಯ, ಐಐಟಿ ತಿರುಪತಿ, ಬೆಂಗಳೂರು ಮುಂತಾದ ಕಡೆಯಿಂದ ಪ್ರಸಿದ್ಧ ವಿದ್ವಾಂಸರುಗಳು ಭಾರತದಲ್ಲಿನ ಗಾಂಧಿ ಮತ್ತು ಅವರ ಸಮಕಾಲೀನರನ್ನು ಕುರಿತಂತೆ ತುಂಬ ಮೌಲಿಕವಾದ ಒಟ್ಟು 17 ವಿಷಯಗಳನ್ನು ಕುರಿತು ಪ್ರಬಂಧ ಮಂಡನೆಯಾಗಲಿವೆ ಎಂದು ತಿಳಿಸಿದರು.ಅತಿಥಿಯಾಗಿ ಆಗಮಿಸಿದ್ದ ಹಿರಿಯ ಗಾಂಧಿ ಮಾರ್ಗಿ ಕೆ.ಟಿ.ವೀರಪ್ಪ, ಪ್ರೊ.ಕಾಳಚೆನ್ನೇಗೌಡ, ದೇವನೂರು ಬಸವರಾಜು, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಎಂ.ಎಸ್.ಶೇಖರ್ ಇತರರು ಉಪಸ್ಥಿತರಿದ್ದರು. …. : . . , . 23, 2020 (..): “ ’ , . , , , , ,” . . , -, . “ ,” , , . “ . . 20th - . - ,” . - . . . , . , , , , , . , . , , , . 17 ... , . . , , .. , , , .: / / : -’---- -..