ಮೈಸೂರಿನ ದೇವರಾಜ ಮಾರುಕಟ್ಟೆಗೆ ಬಂತು 250 ಕೆಜಿ ತೂಕದ ದೈತ್ಯ ‘ಬಟರ್ ಫಿಶ್’… ಮೈಸೂರು,ಡಿಸೆಂಬರ್,23,2020(..):ಮೈಸೂರಿನ ದೇವರಾಜ ಮಾರುಕಟ್ಟೆಗೆ ಬರೊಬ್ಬರಿ 250 ಕೆಜಿ ತೂಕದ ದೈತ್ಯ ಬಟರ್ ಫಿಶ್ ಅನ್ನ ತರಿಸಲಾಗಿದ್ದು, ದೈತ್ಯ ಬಟರ್ ಫಿಶ್ ನೋಡಲು ಜನರು ಮುಗಿಬಿದ್ದ ದೃಶ್ಯ ಕಂಡು ಬಂದಿತು. ಅರಬ್ಬಿ ಸಮುದ್ರದಲ್ಲಿ ಸೆರೆ ಸಿಕ್ಕ ಈ ದೈತ್ಯ ಮೀನನ್ನ ಕೇರಳದ ಕ್ಯಾಲಿಕಟ್ ನಿಂದ ಮೈಸೂರಿಗೆ ತರಿಸಲಾಗಿದೆ. ಬರೊಬ್ಬರಿ 1 ಲಕ್ಷ ಮೌಲ್ಯದ ಈ ಬಟರ್ ಫಿಶ್ ಸುಮಾರು 250 ಕೆಜಿ ತೂಕವನ್ನ ಹೊಂದಿದೆ ಎನ್ನಲಾಗಿದೆ. ಇನ್ನು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನದೀಮ್ ಎಂಬುವವರು ಈ ದೈತ್ಯ ಮೀನನ್ನ ಮೈಸೂರಿಗೆ ತರಿಸಿದ್ದಾರೆ. ಸದ್ಯ ಈ ಮೀನು ನಗರದ ದೇವರಾಜ ಮಟನ್ ಮಾರುಕಟ್ಟೆಯ ಸೀ ಫಿಸ್ ವರ್ಲ್ಡ್ ಫಿಸ್ ಅಂಗಡಿಯಲ್ಲಿದ್ದು, ಈ ದೈತ್ಯ ಮೀನನ್ನ ನೋಡಲು ಜನರು ಮುಗಿಬಿದ್ದಿದ್ದಾರೆ. -250kg- – – .