ಕೌಟುಂಬಿಕ ಕಲಹ, ವ್ಯಕ್ತಿಯೊಬ್ಬ ನೇಣಿಗೆ ಶರಣು..! ಮೈಸೂರು,ಡಿಸೆಂಬರ್,23,2020(..) :ಕೌಟುಂಬಿಕ ಕಲಹದಿಂದ ನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಣೇಶ್ ನಾಯಕ(೪೫) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಗಣೇಶ್ ನಾಯಕ್ ಪತ್ನಿ ಹೇಮಾವತಿಯಿಂದ ಬೇರಾಗಿದ್ದು, ಜೀವನಾಂಶಕ್ಕಾಗಿ ಪತ್ನಿ ಹೇಮಾವತಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡಲು ವಿಫಲನಾಗಿದ್ದ ಗಣೇಶ ನಾಯಕ ಈ ಹಿನ್ನಲೆ ಜೈಲು ವಾಸ ಅನುಭವಿಸಿದ್ದ ಎಂದು ತಿಳಿದು ಬಂದಿದೆ. ಸೋಮವಾರ ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಗಣೇಶ ನಾಯಕ ಮನನೊಂದು ಜಮೀನಲ್ಲಿ ನೇಣಿಗೆ ಶರಣಾಗಿದ್ದಾರೆ. ಪತ್ನಿ ಹಾಗೂ ಮಕ್ಕಳ ವಿರುದ್ದ ಗಣೇಶ್ ನಾಯಕ ಸಂಬಂಧಿಕರು ದೂರು ನೀಡಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : ---- ..!