ಭತ್ತದ ಗದ್ದೆಯಲ್ಲಿ ಉರುಳಿಗೆ ಸಿಕ್ಕ ಹುಲಿ: ಅರವಳಿಕೆ ಮದ್ಧು ನೀಡಿ ಕಾರ್ಯಾಚರಣೆ… ಕೊಡಗು,ಡಿಸೆಂಬರ್,23,2020(..):ಕೊಡಗು ಜಿಲ್ಲೆಯ ಬಾಳೆಲೆ ಗ್ರಾಮದ ಗದ್ದೆಯೊಂದರ ಬಳಿ ಹುಲಿಯೊಂದು ಉರುಳಿಗೆ ಸಿಲುಕಿ , ನರಳುತ್ತಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು ಹುಲಿರಾಯನಿಗೆ ಅರವಳಿಕೆ ಮದ್ದು ನೀಡಿ ಕಾರ್ಯಾಚರಣೆ ನಡೆಸಲಾಯಿತು. ಕಾಡಂದಿ ಬೇಟೆಗೆ ಹಾಕಲಾಗಿದ್ದ ಬಲೆಗೆ ಹುಲಿ ಸಿಲುಕಿತ್ತು. ಭತ್ತ ಕಟಾವು ಮಾಡಲು ತೆರಳಿದ್ದ ರೈತರಿಗೆ ಹುಲಿ ಸಿಲುಕಿರುವುದು ಪತ್ತೆಯಾಗಿದ್ದು, ಈ ಕುರಿತು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪಶುವೈದ್ಯರೊಂದಿಗೆ ಅರಣ್ಯ ಅಧಿಕಾರಿಗಳು ಆಗಮಿಸಿ, ಹುಲಿಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು. ಹುಲಿಗೆ ಅರವಳಿಕೆ ಮದ್ದು ನೀಡಿ ಕಾರ್ಯಾಚರಣೆ ನಡೆಸಲಾಯಿತು. : - --