ಮೈಸೂರು : ರೈಲು ಸಮಯದ ಪರಿಷ್ಕರಣೆ: ಬದಲಾದ ಸಮಯ ಬಗ್ಗೆ ಮಾಹಿತಿ ಇಲ್ಲಿದೆ ಮಾಹಿತಿ… ಮೈಸೂರು,ಡಿಸೆಂಬರ್,22,2020(..): ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ ವಿಶೇಷ ಎಕ್ಸ್‌ ಪ್ರೆಸ್ ಮತ್ತು ಮೈಸೂರು- ಅಜ್ಮೀರ್ ಸಾಪ್ತಾಹಿಕ ಎಕ್ಸ್‌ ಪ್ರೆಸ್ ವಿಶೇಷ ರೈಲು ಸಮಯದ ಪರಿಷ್ಕರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಮತ್ತು ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ. ರೈಲುಗಳ ಪರಿಷ್ಕೃತ ಸಮಯವನ್ನುಈ ಕೆಳಕಂಡಂತಿದೆ…. ರೈಲು ಸಂಖ್ಯೆ 06581/06582 ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ ವಿಶೇಷ ಎಕ್ಸ್‌ ಪ್ರೆಸ್ ರೈಲಿನ ಹುಬ್ಬಳ್ಳಿಯಿಂದ 23.12.2020 ರಂದು ಮತ್ತು ಮೈಸೂರಿನಿಂದ 23.12.2020 ರಂದು ಪ್ರಾರಂಭವಾಗುವ ಪ್ರಯಾಣವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 06581 ಹುಬ್ಬಳ್ಳಿ – ಮೈಸೂರು ಉತ್ಸವದ ವಿಶೇಷ ಎಕ್ಸ್‌ ಪ್ರೆಸ್ 18:20 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ 08:55 ಗಂಟೆಗೆ ಮೈಸೂರು ತಲುಪಲಿದೆ. ಅದರಂತೆ ರೈಲು ಸಂಖ್ಯೆ 06582 ಮೈಸೂರು – ಹುಬ್ಬಳ್ಳಿ ಸ್ಪೆಷಲ್ ಎಕ್ಸ್‌ ಪ್ರೆಸ್ ಮೈಸೂರಿನಿಂದ 18:35 ಗಂಟೆಗೆ ಹೊರಟು ಮರುದಿನ 10:25 ಗಂಟೆಗೆ ಧಾರವಾಡಕ್ಕೆ ಆಗಮಿಸಲಿದೆ. ಈ ಸಮಯವು ಮೈಸೂರಿನಿಂದ 23.12.2020 ರಂದು ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ. ರೈಲು ಸಂಖ್ಯೆ .06210 ಮೈಸೂರು- ಅಜ್ಮೀರ್ ಸಾಪ್ತಾಹಿಕ ಎಕ್ಸ್‌ ಪ್ರೆಸ್ ವಿಶೇಷ ಮಂಗಳವಾರ ಮೈಸೂರಿನಿಂದ 19:00 ಗಂಟೆಗೆ ಹೊರಟು ಗುರುವಾರ ಅಜ್ಮೀರ್ ತಲುಪಲಿದೆ. ರೈಲು ಸಂಖ್ಯೆ 06209 ಅಜ್ಮೀರ್ – ಮೈಸೂರು ಎಕ್ಸ್‌ ಪ್ರೆಸ್ ವಿಶೇಷ ಭಾನುವಾರ ಅಜ್ಮೀರ್‌ನಿಂದ 06.00 ಗಂಟೆಗೆ ಹೊರಟು ಮಂಗಳವಾರ 02.15 ಗಂಟೆಗೆ ಮೈಸೂರು ತಲುಪಲಿದೆ. : - – ----