ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹ: ಕೊರೋನಾ ಹೊಸ ಪ್ರಭೇದದ ಬಗ್ಗೆ ಆತಂಕ ಬೇಡ- ಸಚಿವ ಸುಧಾಕರ್… ಬೆಂಗಳೂರು,ಡಿಸೆಂಬರ್,23,2020(..):ಕೊರೋನಾ ಹೊಸ ಪ್ರಭೇದ ವೇಗವಾಗಿ ಹರಡುತ್ತದೆ.ಆದರೂ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಕೊರೋನಾ ರೂಪಾಂತರ ಕುರಿತು ಮಾತನಾಡಿದ ಸಚಿವ ಸುಧಾಕರ್, ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಜನರಿಗೆ ಈ ಬಗ್ಗೆ ಯಾವುದೇ ತಪ್ಪು ಮಾಹಿತಿ ನೀಡುತ್ತಿಲ್ಲ. ನಿನ್ನೆ ಹಿರಿಯ ನಾಯಕರೊಬ್ಬರು ಹೇಳಿದ್ದರು. ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಿದ್ದೇನೆ ಎಂದರು. ಕೊರೋನಾ ರೂಪಾಂತರ ತಡೆಯುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನೈಟ್ ಕರ್ಫ್ಯೂ ಬಗ್ಗೆ ಸಲಹ ಸಮಿತಿ ಸಲಹೆ ಪಡೆದು ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಸದ್ಯ ಕೊರೋನಾ ಹೊಸ ಪ್ರಭೇದದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು. … : , .23,2020 (..): “ . . ,” . . , . , . “ . ,” .“ . . , ,” .: . / -19/ / : – - – - – - -.