ಮೈಸೂರು ಮಹಾನಗರ ಪಾಲಿಕೆಗೆ ಬಿಗ್ ಶಾಕ್: ದೇವರಾಜ ಮಾರುಕಟ್ಟೆ ನೆಲಸಮಗೊಳಿಸಲು ಹೈಕೋರ್ಟ್ ತಡೆ… ಮೈಸೂರು,ಡಿಸೆಂಬರ್,22,2020(..):ದೇವರಾಜು ಮಾರುಕಟ್ಟೆ ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದ ಮೈಸೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಮೈಸೂರು ದೇವರಾಜ ಮಾರುಕಟ್ಟೆ ನೆಲಸಮಗೊಳಿಸಲು ಹೈಕೋರ್ಟ್ ತಡೆ ನೀಡಿದೆ. ಇದೀಗ ಕೋರ್ಟ್ ಆದೇಶದಿಂದ ಮೈಸೂರು ಮಹಾನಗರ ಪಾಲಿಕೆಗೆ ಹಿನ್ನೆಡೆಯಾದಂತಾಗಿದೆ. ದೇವರಾಜು ಮಾರುಕಟ್ಟೆ ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿತ್ತು. ದೇವರಾಜ ಮಾರುಕಟ್ಟೆ ನೆಲಸಮಗೊಳಿಸುವುದಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದರು. ಯದುವೀರ್ ಅಭಿಪ್ರಾಯಕ್ಕೆ ಸಾರ್ವಜನಿಕರು ಸಹಮತ ವ್ಯಕ್ತಪಡಿಸಿದ್ದರು. : –- - - -