ಬೇಡಿಕೆಗಳ ಈಡೇರಿಕೆ ಭರವಸೆ, ಆನ್ ಲೈನ್ ತರಗತಿಗಳ ಆರಂಭ : ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಬೆಂಗಳೂರು,ಡಿಸೆಂಬರ್,22,2020(..): ಹದಿಮೂರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ರುಪ್ಸಾ ಅಡಿಯಲ್ಲಿ ಬರುವ ಶಾಲೆಗಳ ಆನ್ ಲೈನ್ ತರಗತಿಗಳ ಆರಂಭಿಸುವುದಾಗಿ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ. ಸುಮಾರು 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಇಲಾಖೆ ವಿರುದ್ಧ ಹೋರಾಟ ಆರಂಭಿಸಿ ಆನ್ ಲೈನ್ ಮತ್ತು ಆಪ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿತ್ತು. 15 ಬೇಡಿಕೆಗಳ ಪೈಕಿ 13 ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆ ಆನ್ ಲೈನ್ ಕ್ಲಾಸ ಆರಂಭಕ್ಕೆ ಸಿದ್ದ ಎಂದು ಲೋಕೇಶ್ ತಾಳಿಕೋಟೆ ತಿಳಿಸಿದ್ದಾರೆ. : ------ -