ಗ್ರಾಪಂ ಚುನಾವಣೆ ಸ್ಪಂದಿಸುವ ಅಭ್ಯರ್ಥಿಗಳಿಗೆ ಜನ ಮತ ಹಾಕುತ್ತಾರೆ : ಶಾಸಕ ಡಾ.ಜಿ.ಪರಮೇಶ್ವರ ತುಮಕೂರು,ಡಿಸೆಂಬರ್,22,2020(..):ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮಗೆ ಸ್ಪಂದಿಸುವ ಅಭ್ಯರ್ಥಿಗಳು ಮತ್ತು ಸ್ಥಳೀಯ ವಿಚಾರಗಳನ್ನು ಪ್ರಮುಖವಾಗಿ ಗಮನಿಸಿ ಮತ ಹಾಕುವರು ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು. ನಗರ ಹೊರವಲಯದ ಸಿದ್ದಾರ್ಥ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಈ ಚುನಾವಣೆಯಲ್ಲಿ ಜನರು ಒಳ್ಳೆಯ ತೀರ್ಪು ನೀಡುವರು ಎಂದರು. ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವೂ ಮುಖ್ಯವಾಗುತ್ತದೆ. ನಾವು ರಾಜಕೀಯ ನಾಯಕರು ಜನರ ಮುಂದೆ ಅಸಂಬದ್ಧವಾಗಿ ಮಾತನಾಡಬಾರದು. ಅದು ಜನರಿಗೆ ಮನರಂಜನೆ ಆಗುತ್ತದೆ ಎಂದು ತಿಳಿಸಿದರು. : ----- ..