ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಶತಸಿದ್ದ- ಶಾಸಕ ನಾಗೇಂದ್ರ ಮೈಸೂರು,ಡಿಸೆಂಬರ್,21,2020(..):ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಶತಸಿದ್ದ ಎಂದು ಬಿಜೆಪಿ ಶಾಸಕ ನಾಗೇಂದ್ರ ತಿಳಿಸಿದ್ದಾರೆ. ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ನಾಗೇಂದ್ರ, ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ನೂರಕ್ಕೆ ಇನ್ನೂರು ಭಾಗ ಮೈತ್ರಿ ಆಗುತ್ತೆ. ಕಾಂಗ್ರೆಸ್ ನವರ ಒಳ ಜಗಳದಿಂದ ಜೆಡಿಎಸ್ ನವರು ಬೇಸತ್ತಿದ್ದಾರೆ. ಅಧಿಕಾರ ನಡೆಸಲು ಕಾಂಗ್ರೆಸ್ ನಾಯಕರು ಬಿಟ್ಟಿಲ್ಲ. ನಮ್ಮೊಟ್ಟಿಗೆ ಈಗಾಗಲೇ ಮಾತುಕತೆ ಆಗಿದೆ ಎಂದು ಹೇಳಿದರು. ಪಾಲಿಕೆಯಲ್ಲಿ ಹೆಚ್ಚು ಸದಸ್ಯರು ಹೊಂದಿರುವರಿಗೆ ಮೇಯರ್ ಸ್ಥಾನ ನೀಡಿ. ಮೇಯರ್ ಸ್ಥಾನ ಬಿಜೆಪಿಯವರಿಗೆ ನೀಡಬೇಕು. ಈ ಒತ್ತಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ನಾಗೇಂದ್ರ ತಿಳಿಸಿದರು. : - - – - – -