ಬಿಜೆಪಿ, ಜೆಡಿಎಸ್ ವಿಲೀನದ ಬಗ್ಗೆ ಮಾತನಾಡುವುದು ಅವಮಾನಿಸಿದಂತೆ : ಸಿಎಂ ಬಿ.ಎಸ್.ಯಡಿಯೂರಪ್ಪ ಬೇಸರ ಬೆಂಗಳೂರು,ಡಿಸೆಂಬರ್,21,2020(..) :ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೆಡಿಎಸ್ ಪಕ್ಷ ಕಟ್ಟುತ್ತಾರೆ. ಆ ಪಕ್ಷ ಬೆಳೆಸಿ ಅಧಿಕಾರಕ್ಕೆ ಬರುತ್ತಾರೆ. ಬಿಜೆಪಿ, ಜೆಡಿಎಸ್ ವಿಲೀನದ ಬಗ್ಗೆ ಮಾತನಾಡುವುದು ಅವಮಾನಿಸಿದಂತೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಬೇಸರವ್ಯಕ್ತಪಡಿಸಿದ್ದಾರೆ.ಬಿಜೆಪಿ, ಜೆಡಿಎಸ್ ವಿಲೀನದ ಬಗ್ಗೆ ಮಾತನಾಡುವುದು ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಅವಮಾನಿಸಿದಂತೆ. ವಿಲೀನದ ಬಗ್ಗೆ ನಾನು ಮಾತನಾಡುವುದಿಲ್ಲ. ಬೇರೆ ಯಾರು ಮಾತನಾಡಬಾರದು. ವಿಲೀನ ಆಗುತ್ತಾರೆ ಎಂದು ಹೇಳುವುದು ಶೋಭೆ ತರುವುದಿಲ್ಲ. ನಮ್ಮ ಪಕ್ಷದಲ್ಲಿ ಯಾರು ಈ ರೀತಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. : ------ ..-