ಮೈಸೂರು ಡಿಸಿ ವರ್ಗಾವಣೆ ವಿವಾದ: ಸಿಎಂ ಬಿಎಸ್ ವೈ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಫುಲ್ ಗರಂ…. ಮೈಸೂರು,ಡಿಸೆಂಬರ್,21,2020(..):ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಬಿ. ಎಸ್ ಯಡಿಯೂರಪ್ಪ ವಿರುದ್ಧ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್ ಫುಲ್ ಗರಂ ಆಗಿದ್ದಾರೆ. ಡಿಸಿ ವರ್ಗಾವಣೆ ವಿವಾದ ಕುರಿತು ಮಾತನಾಡಿರುವ ಸಂಸದ ಶ್ರೀನಿವಾಸ್ ಪ್ರಸಾದ್, ಡಿಸಿ ಶರತ್‌ ಅವರನ್ನ ಒಂದೆ ತಿಂಗಳಲ್ಲಿ ಎತ್ತಂಗಡಿ ಮಾಡಿದ್ದು ಸಿಎಂ‌ ತಪ್ಪು ನಿರ್ಧಾರ. ರೋಹಿಣಿ ಸಿಂಧೂರಿಗೆ ಜಾಗ ತೋರಿಸಬೇಕೆಂದಿದ್ದರೆ ಬೇರೆ ಕಡೆ‌ ಅವಕಾಶ ಕೊಡಬೇಕಿತ್ತು. ಅವಳು ದುರಹಂಕಾರಿ, ಜನಪ್ರತಿನಿಧಿಗಳಿಗೆ ಗೌರವ ಕೊಡಲ್ಲ ಅನ್ನೋ ಕಾರಣಕ್ಕಲ್ವೇ ನಾನ್‌ ಎಕ್ಸಿಕ್ಯೂಟಿವ್ ಪೋಸ್ಟ್‌ಗೆ ಹಾಕಿದ್ದು. ಈಗ ಅವಳನ್ನೇ ಮೈಸೂರು ಡಿಸಿಯಾಗಿ ನೇಮಿಸಿದ್ದು ನನಗೆ ಸುತಾರಾಂ ಇಷ್ಟ ಆಗಲಿಲ್ಲ ಎಂದು ಕಿಡಿಕಾರಿದ್ದಾರೆ. ಗುಲ್ಬರ್ಗಾದಲ್ಲಿ ಶರತ್‌ ಗೆ ಒಳ್ಳೆ ಹೆಸರಿತ್ತು. ಅವರನ್ನ ಇಲ್ಲಿಗೆ ವರ್ಗಾವಣೆ ಮಾಡಿ‌ 29 ದಿನದಲ್ಲಿ ಬೇರೆ ಕಡೆ ಹಾಕಿದ್ದು ಎಷ್ಟು ಸರಿ..? ಎಂದು ಪ್ರಶ್ನಿಸಿರುವ ಸಂಸದ ಶ್ರೀನಿವಾಸ್ ಪ್ರಸಾದ್, ಇಂತಹ ವಿಚಾರದಲ್ಲಿ ಸಿಎಂ ವಿವೇಚನೆಯಿಂದ ವರ್ತಿಸಬೇಕು. ಚಾಮರಾಜನಗರ ಎಸ್ಪಿಯನ್ನ ವರ್ಗಾವಣೆ ಮಾಡಿದಾಗಲೇ ನಾನು ವಾರ್ನಿಂಗ್ ಮಾಡಿದ್ದೆ. ಡಿಜಿ ಪ್ರವೀಣ್ ಸೂದ್ ಜೊತೆಗೂ ಮಾತನಾಡಿದ್ದೆ. ಎಸ್ಪಿ ಕೋವಿಡ್ ಟೈಂನಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ, ಯಾಕೆ ಒಂದೇ ವರ್ಷದಲ್ಲಿ ವರ್ಗಾವಣೆ ಮಾಡ್ತೀರ ಅಂತ ಎಂದು ತಿಳಿಸಿದರು. ….. : , . 21, 2020 (..): . .. . , . ’ . . “ - ?! ’ ,” .“ . 29 , ?! . . . ?,” .: . / .. / / / / : –- - -