ನಾಳೆ ಮೊದಲ ಹಂತದ ಗ್ರಾ.ಪಂ ಚುನಾವಣೆ : ಮದ್ಯ ಮಾರಾಟ ಬಂದ್ ಮಾಡಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶ.. ಮೈಸೂರು,ಡಿಸೆಂಬರ್,21,2020(..):ನಾಳೆ ಮೊದಲ ಹಂತದ ಗ್ರಾಮ ಚುನಾವಣೆಯ ಮತದಾನ ನಡೆಯಲಿದ್ದು, ಮೈಸೂರು ಜಿಲ್ಲೆ ಐದು ತಾಲ್ಲೂಕುಗಳಲ್ಲಿ ಮದ್ಯ ಮಾರಾಟ ಬಂದ್‌ ಮಾಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಾಗೂ ಶಾಂತಿಯುತ ಮತದಾನ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ಬಂದ್‌ ಮಾಡಲಾಗಿದೆ. ಮತದಾನ ನಡೆಯುವ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ನಾಳೆ ಸಂಜೆ 5ರವರೆಗೆ ಮದ್ಯ ಮಾರಾಟ ಬಂದ್ ಮಾಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಅಕ್ರಮ ಮದ್ಯ ಮಾರಾಟ, ಸಾಗಾಣೆ ಕಂಡುಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ನಾಳೆ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಡಿಸೆಂಬರ್ 27 ರಂದು 2ನೇ ಹಂತದ ಚುನಾವಣೆ ಮತದಾನ ನಡೆಯಲಿದ್ದು ಡಿಸೆಂಬರ್ 30 ರಂದು ಫಲಿತಾಂಶ ಹೊರಬೀಳಲಿದೆ. …. 5 , . 21, 2020 (..): ., 5 , , .. , .. , . , .: / / : - - –- - –- -