ಪಕ್ಷದೊಳಗಿನ ವಿರೋಧಿಗಳು ಯಾರು ಎಂದು ಸಿದ್ದರಾಮಯ್ಯ ಹೇಳಲಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಗಳೂರು,ಡಿಸೆಂಬರ್,20,2020(..) :ಪಕ್ಷದೊಳಗೆ ವಿರೋಧಿಗಳಿದ್ದಾರೆ ಎನ್ನುವ ಸಿದ್ದರಾಮಯ್ಯ ಯಾರು ತಮ್ಮ ವಿರೋಧಿ ಅಂತ ಹೇಳಲಿ. ಸಿದ್ದರಾಮಯ್ಯ ಹೇಳಿದಂತೆ ಬದುಕಲಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧಮ್ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ, ಈಗ ಸಿದ್ದರಾಮಯ್ಯ ತಮ್ಮ ಧಮ್ ತೋರಿಸಲಿ. ಸಮಾಜವಾದಿ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅಧಿಕಾರದಲ್ಲಿದ್ದಾಗ ಮಜಾವಾದಿಗಳಾಗಿದ್ದರು. ಸಿದ್ದರಾಮಯ್ಯ ಹೇಳಿದಂತೆ ಬದುಕಲಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ ಎಂದು ಕಿಡಿಕಾರಿದ್ದಾರೆ. : ----?-----..