ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಹುಲಿ ದರ್ಶನ…! ಚಾಮರಾಜನಗರ,ಡಿಸೆಂಬರ್,20,2020(..) :ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಪ್ರವಾಸಿಗರಿಗೆ, ಭಕ್ತರಿಗೆ ಕಾಣಿಸಿಕೊಳ್ಳುತ್ತಿದೆ. ಈ ಹುಲಿಯು ಪ್ರವಾಸಿಗರ ಕಣ್ಮಣಿಯಾಗಿದ್ದ ಬಂಡೀಪುರದ ಪ್ರಿನ್ಸ್ ಹುಲಿಯಂತೆ ಕಂಡು ಬರುತ್ತಿದೆ. ಕೆಎಸ್ಆರ್​ಟಿಸಿ ಬಸ್ ಮೂಲಕ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಹುಲಿಯೊಂದು ಗುಡ್ಡದ ಮೇಲೆ ನಿಂತಿರುವುದನ್ನು ಪ್ರವಾಸಿಗರು ಕಂಡು ಪುಳಕಿತರಾಗಿದ್ದಾರೆ. ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರಕಾಶ್ ಎಂಬವರು ಹುಲಿ ಓಡಾಟದ ವಿಡಿಯೋ ಸೆರೆಹಿಡಿದಿದ್ದಾರೆ. ಈ ಹಿಂದೆಯೂ ಪ್ರವಾಸಿಗರಿಗೆ ಕಟ್ಟೆಯ ಮೇಲೆ, ರಸ್ತೆ ಮಧ್ಯೆ ಕುಳಿತಿ ಮತ್ತು ರಸ್ತೆ ದಾಟುವ ವೇಳೆ ದರ್ಶನ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬೆಟ್ಟದ ಹುಲಿ ಜನಪ್ರಿಯವಾಗುತ್ತಿದೆ. ಈ ಹುಲಿಗೆ ಅಂದಾಜು 6-7 ವರ್ಷಗಳಾಗಿದ್ದು, ಬೆಟ್ಟದ ಸುತ್ತಮುತ್ತಲು ತನ್ನ ಸರಹದ್ದನ್ನು ರೂಪಿಸಿಕೊಂಡಿದೆ ಎಂದು ತಿಳಿದು ಬಂದಿದೆ. : ---- …!