ರೈತರ ಪರಂಪರೆಯಿಂದ ಬಾರದವರು ಬುದ್ಧಿವಾದ ಹೇಳೋದು ಸರಿಯಲ್ಲ : ಸಚಿವ ಆರ್.ಅಶೋಕ್ ಬೆಂಗಳೂರು,ಡಿಸೆಂಬರ್,19,2020(..) :ಕಾಂಗ್ರೆಸ್‌ ನಾಯಕರು ಢೋಂಗಿ ರಾಜಕಾರಣ ಮಾಡುತ್ತಿದ್ದು, ರೈತರ ಪರಂಪರೆಯಿಂದ ಬಾರದವರು ಬುದ್ಧಿವಾದ ಹೇಳೋದು ಸರಿಯಲ್ಲ. ರಾಹುಲ್‌ ಗಾಂಧಿ ಏನು ಹೊಲ ಉತ್ತಿದ್ದಾರಾ?, ಬಿತ್ತಿದ್ದಾರಾ? ಅವರ ತಂದೆ, ತಾಯಿ, ಅಜ್ಜ- ಅಜ್ಜಿ ಯಾರೂ ರೈತರಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವ್ರಿಗೆ ರೈತರ ಕಷ್ಟ ಗೊತ್ತಿಲ್ಲ ಎಂಬ ರಾಹುಲ್‌ ಗಾಂಧಿ ಹೇಳಿಕೆ ವಿರುದ್ದ ಆಕ್ರೋಶವ್ಯಕ್ತಪಡಿಸಿದ್ದ ಅವರು, ರೈತರು ಈ ಮೊದಲು ತಾವು ಬೆಳೆದ ಉತ್ಪನ್ನಗಳನ್ನ ಎಪಿಎಂಸಿ ಬಿಟ್ಟು ಬೇರೆ ಕಡೆಗಳಲ್ಲಿ ಮಾರುವಂತಿರಲಿಲ್ಲ. ಹಾಗೆ ಮಾಡಿದ್ದರೆ ರೈತರ ಮೇಲೆ ಕೇಸ್‌ ಹಾಕಬಹುದಿತ್ತು. ಹೊಸ ಕಾಯ್ದೆಗಳಿಂದ ರೈತರಿಗೆ ಪೂರ್ಣ ಸ್ವಾತಂತ್ರ ಸಿಕ್ಕಿದೆ. ರೈತ ತಾನು ಬೆಳೆದ ಉತ್ಪನ್ನಗಳನ್ನ ಎಲ್ಲಿ ಬೇಕಾದರೂ ಮಾರಬಹುದು ಎಂದು ತಿಳಿಸಿದರು. : ----------.