ನನ್ನ ಮತ್ತು ಸಿದ್ದರಾಮಯ್ಯ ನಡುವೆ ಬಾಂಧವ್ಯ ಸರಿಯಿಲ್ಲ ಎಂಬುದು ಸತ್ಯಕ್ಕೆ ದೂರ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟ್ವೀಟ್ ಮೈಸೂರು,ಡಿಸೆಂಬರ್,19,2020(..): ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದನ್ನು ಬಳಸಿಕೊಂಡು ಕೆಲ ಮಾಧ್ಯಮಗಳು ನನ್ನ ಮತ್ತು ಸಿದ್ದರಾಮಯ್ಯ ನಡುವೆ ಬಾಂಧವ್ಯ ಸರಿಯಿಲ್ಲ ಎಂಬ ಸುದ್ದಿ ಹರಡುತ್ತಿರುವುದು ಸತ್ಯಕ್ಕೆ ದೂರ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದಾರೆ. ಅನಾರೋಗ್ಯದಿಂದ ನಾನು ಮನೆಯಲ್ಲಿರುವ ಕಾರಣವನ್ನು ಅರಿಯದೇ ಕೆಲ ಮಾಧ್ಯಮಗಳು ಈ ರೀತಿಯಾಗಿ ಸುಳ್ಳು ಸುದ್ದಿ ಹರಡುತ್ತಿವೆ. ಕಪೋಲ ಕಲ್ಪಿತ ಕಥೆಗಳು ಇಲ್ಲಿಗೇ ನಿಲ್ಲಲಿ! ಎಂದು ಮನವಿ ಮಾಡಿದ್ದಾರೆ. : ------ ----...-