ಲೋಕಾಯುಕ್ತವನ್ನೇ ಇಲ್ಲವಾಗಿಸಿದ್ದು ಸಿದ್ದರಾಮಯ್ಯ : ಎಚ್.‌ವಿಶ್ವನಾಥ್ ಆರೋಪ ಮೈಸೂರು,ಡಿಸೆಂಬರ್,19,2020(..): ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಲೋಕಾಯುಕ್ತವನ್ನೇ ಇಲ್ಲವಾಗಿಸಿದ್ದು ಇದೇ ಸಿದ್ದರಾಮಯ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.‌ವಿಶ್ವನಾಥ್ ಆರೋಪಿಸಿದರು. ದಲಿತರ ಬಲಗೈ ಸಮುದಾಯ ನನಗೆ ಮತ ನೀಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಿಶ್ವನಾಥ್ ಟಾಂಗ್ ನೀಡಿದ್ದು, ನಾನೇನು ಜೈಲಿಗೆ ಹೋಗಿ ಬಂದಿಲ್ಲ ಎನ್ನುತ್ತಿರುವ ಸಿದ್ದರಾಮಯ್ಯ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ನೀವು ನಿರ್ನಾಮ ಮಾಡಿದಿರಿ ಇಡೀ ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿಕೊಂಡು ಬಂದಿದೆ. ಯಾವ ಪಕ್ಷ ನಿಮ್ಮನ್ನು ಮುಖ್ಯಮಂತ್ರಿ ಮಾಡಿತೋ ಅದೇ ಕಾಂಗ್ರೆಸ್ ಪಕ್ಷವನ್ನು ನೀವು ನಿರ್ನಾಮ ಮಾಡಿದಿರಿ. ಈ ಕುರಿತು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯಗೆ ವಿಶ್ವನಾಥ್ ಸಲಹೆ ನೀಡಿದ್ದಾರೆ. ಚಾಮುಂಡೇಶ್ವರಿ ಗೆಲ್ಲೊಲ್ಲ ಎಂದು ಬಾದಮಿಗೆ ಓಡಿ ಹೋದ್ರಿ ನೀವು ಪರಮೇಶ್ವರ್ ಸೋಲಿಸಿದಾಗ ನಿಮಗೆ ಗೊತ್ತಾಗಲಿಲ್ವಾ. ಚಾಮುಂಡೇಶ್ವರಿ ಗೆಲ್ಲೊಲ್ಲ ಅಂತ ಗೊತ್ತಾದಾಗ ಬಾದಮಿಗೆ ಓಡಿ ಹೋದ್ರಿ. ಐದು ವರ್ಷ ಆಡಳಿತ ನಡೆಸಿದ ನಿಮ್ಮನ ಜನ ದಿಕ್ಕರಿಸಿದರು‌ ಎಂದು ಟೀಕಿಸಿದರು. :---.-