ಹೆಚ್.ಡಿಕೆ ಹೋಟೆಲ್ ನಲ್ಲಿ ಉಳಿಯಲು ಸಿದ್ಧರಾಮಯ್ಯನೇ ಕಾರಣ- ಶಾಸಕ ಸಾ.ರಾ ಮಹೇಶ್ ತಿರುಗೇಟು… ಮೈಸೂರು,ಡಿಸೆಂಬರ್,19,2020(..):ಹೆಚ್.ಡಿ ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ಅಧಿಕಾರ ನಡೆಸುತ್ತಿದ್ದರು. ಶಾಸಕರಿಗೆ ಸ್ಪಂದಿಸಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಶಾಸಕ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಹೋಟೆಲ್ ಗೆ ಹೋಗಲು ಸಿದ್ಧರಾಮಯ್ಯನೇ ಕಾರಣ. ಸಿದ್ಧರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡಿರಲಿಲ್ಲ. ಹೀಗಾಗಿ ಹೆಚ್.ಡಿ ಕುಮಾರಸ್ವಾಮಿ ಹೋಟೆಲ್ ನಲ್ಲೇ ಉಳಿಯಬೇಕಾಯಿತು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಜೆ.ಪಿ ನಗರದ ನಿವಾಸ ದೂರವಿತ್ತು. ಹೀಗಾಗಿ ಹೋಟೆಲ್ ಗೆ ಹೋದ್ರು. ಯಾಕೆ ಹೆಚ್.ಡಿಕೆ ವಿಧಾನಸೌಧಕ್ಕೆ ಬರ್ತಿರಲಿಲ್ವಾ…? ವಿಶ್ರಾಂತಿ ಪಡೆಯಲು ಹೋಟೆಲ್ ಗೆ ಹೋಗೋದು ತಪ್ಪಾ…? ಎಂದು ಪ್ರಶ್ನಿಸಿದ್ದಾರೆ. ….. – . . , .19, 2020 (..): ’ .. - , . . . “ ‘’. .. ,” . ’ .. , . “ ’ ? ?” .: ../ .. / / : – - - - - –.