ನ್ಯಾಯ ಕೇಳಿದವರ ಅಮಾನತು ಮಾಡಿ ಉತ್ತರನ ಪೌರುಷ ತೋರಿದೆ : ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಬಾಣ… ಬೆಂಗಳೂರು,ಡಿಸೆಂಬರ್,18,2020(..): ಸರ್ಕಾರವು ತಮ್ಮ ಬೇಡಿಕೆಗಳಿಗೆ ಪ್ರತಿಭಟಿಸಿದ ಸಾರಿಗೆ ನಿಗಮಗಳ 200 ನೌಕರರನ್ನು ದ್ವೇಷದಿಂದ ಅಮಾನತು ಮಾಡಿದೆ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರದಿಂದ ಪಾಲು ತರದೆ, ರಾಜ್ಯವನ್ನೂ ಆರ್ಥಿಕ ಸಂಕಷ್ಟಕ್ಕೆ ದೂಡಿ, ಸಮರ್ಪಕವಾಗಿ ವೇತನ ನೀಡದೇ ನೌಕರರನ್ನೂ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಬಿಜೆಪಿ ಸರ್ಕಾರವು ನ್ಯಾಯ ಕೇಳಿದವರನ್ನ ಅಮಾನತು ಮಾಡಿ ಉತ್ತರನ ಪೌರುಷ ತೋರಿದೆ ಎಂದು ಕಿಡಿಕಾರಿದೆ. : ---------