ಐಟಿ ಬಳಸಿಕೊಂಡು ಕಾಂಗ್ರೆಸ್ ನವರ ಮೇಲೆ ದಾಳಿ: ಬಿಜೆಪಿ ಎಲ್ಲೂ ಹಣ ಹಂಚುತ್ತಿಲ್ಲವಾ..? ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ. ಬೆಂಗಳೂರು,ಏಪ್ರಿಲ್,25,2024 (..):ಐಟಿ ಬಳಸಿಕೊಂಡು ಕಾಂಗ್ರೆಸ್ ನವರ ಮೇಲೆ ದಾಳಿ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲೇ ಐಟಿ ದಾಳಿ ನಡೆದಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನವರ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿ ನಾಯಕರು ಎಲ್ಲೂ ಹಣ ಹಂಚುತ್ತಿಲ್ಲವಾ..? ಬೆ. ಗ್ರಾಮಾಂತರ ವ್ಯಾಪ್ತಿಯಲ್ಲೇ ಐಟಿ ದಾಳಿಯಾಗಿದೆ. ಡಿಕೆ ಶಿವಕುಮಾರ್ ಹಣ ಅಂತ ಹೇಳಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಹೇಳಿದಂತೆ ಮಾತು ಉಳಿಸಿಕೊಂಡಿದ್ದೇವೆ. ನಿರುದ್ಯೋಗಿಗಳಿಗೆ ಕೆಲಸ ಕೊಡುವುದು ಸೇರಿದಂತೆ ಆನೇಕ ಯೋಜನೆಗಳನ್ನ ತರುತ್ತೇವೆ. ಆದರೆ ಬಿಜೆಪಿಯವರ ಸರ್ಕಾರ ಚೊಂಬು ಕೊಟ್ಟಿದೆ. ಮೋದಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಎಲ್ಲಾ ಕಡೆ ವಿಫಲವಾಗುತ್ತಿದೆ ತೆಲಂಗಾಣದಲ್ಲೂ ಸಹಕಾರವಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಡಬಲ್ ಡಿಜಿಟ್ ಬರುವುದು ಅಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು. : , , , ,