ವಿಶ್ವನಾಥನ್ ಆನಂದ್​ ಬಯೋಪಿಕ್’ಗೆ ಸಿದ್ಧತೆ: ಅಭಿಷೇಕ್ ಬಚ್ಚನ್, ಧನುಷ್ ಯಾರಾಗಲಿದ್ದಾರೆ ಗ್ರ್ಯಾಂಡ್ ಮಾಸ್ಟರ್ ? ಬೆಂಗಳೂರು, ಡಿಸೆಂಬರ್,18,2020(..):ಚೆಸ್ ಗ್ರ್ಯಾಂಡ್ ಮಾಸ್ಟರ್​ ವಿಶ್ವನಾಥನ್ ಆನಂದ್​ ಬಯೋಪಿಕ್ ತೆರೆ ಮೇಲೆ ತರಲು ಸಿದ್ಧತೆ ನಡೆದಿದೆ. ಬಾಲಿವುಡ್​​​ನಲ್ಲಿ ಈ ಬಯೋಪಿಕ್​​​​​ ತಯಾರಾಗುತ್ತಿದ್ದು ಚಿತ್ರವನ್ನು ಆನಂದ್ ಎಲ್​​​.ರಾಯ್ ನಿರ್ದೇಶಿಸುತ್ತಿದ್ದಾರೆ.ಚಿತ್ರವನ್ನು ಕಲರ್ ಎಲ್ಲೋ ಪ್ರೊಡಕ್ಷನ್ಸ್​ ಹಾಗೂ ಸನ್ ಡಯಲ್ ಎಂಟರ್​​​ಟೈನ್ಮೆಂಟ್​ ಸಂಸ್ಥೆ ಜೊತೆ ಸೇರಿ ನಿರ್ಮಿಸುತ್ತಿದೆ. ಸಿನಿ ವಿಶ್ಲೇಷಕ ತರಣ್ ಆದರ್ಶ್ ಈ ವಿಚಾರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಆನಂದ್ ಎಲ್​. ರಾಯ್​​​​​ ‘ಅತ್ರಾಂಗಿ ರೇ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಬಚ್ಚನ್ ಅಥವಾ ಧನುಷ್ ಆಯ್ಕೆಯಾಗುವ ಸಾಧ್ಯತೆ ಇದೆ.