ಪ್ರತ್ಯೇಕ ಕಸದ ಶುಲ್ಕ ಪ್ರಸ್ತಾವನೆ ಕೈಬಿಟ್ಟ ಬಿಬಿಎಂಪಿ… ಬೆಂಗಳೂರು,ಡಿಸೆಂಬರ್,17,2020(..):ಪ್ರತ್ಯೇಕ ಕಸದ ಶುಲ್ಕದ ಪ್ರಸ್ತಾವನ್ನೆಯನ್ನ ಬಿಬಿಎಂಪಿ ಕೈಬಿಟ್ಟಿದ್ದು ಸದ್ಯ ಬೆಂಗಳೂರಿನ ಜನತೆ ನಿರಾಳರಾಗಿದ್ದಾರೆ. ಬಿಬಿಎಂಪಿ ಪ್ರತ್ಯೇಕ ಕಸದ ಶುಲ್ಕ ವಸೂಲಿಗೆ ಚಿಂತನೆ ನಡೆಸಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ನಡುವೆ ಬಿಬಿಎಂಪಿ ಈ ಕ್ರಮಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇದೀಗ ಪ್ರತ್ಯೇಕ ಕಸದ ಶುಲ್ಕ ಸಂಗ್ರಹಕ್ಕೆ ಬ್ರೇಕ್ ಹಾಕಲಾಗಿದೆ. ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಸದ್ಯಕ್ಕೆ ಪ್ರತ್ಯೇಕ ಕಸದ ಶುಲ್ಕ ಸಂಗ್ರಹ ಇಲ್ಲ ಎಂದಿದ್ದಾರೆ. : –- – -.