ಕಾಶ್ಮೀರದಲ್ಲಿ ಬೀಡುಬಿಟ್ಟ ಚಾರ್ಲಿ ಆ್ಯಂಡ್ ಟೀಂ ! ಬೆಂಗಳೂರು, ಡಿಸೆಂಬರ್ 17, 2020 (..):ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದೆ. ಅಂದಹಾಗೆ ಚಾರ್ಲಿ ನಾಯಿ ಜೊತೆಗಿರುವ ಫೋಟೋಗಳನ್ನು ರಕ್ಷಿತ್ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಒಂದು ವಾರ ಕಾಲ ಕಾಶ್ಮೀರದಲ್ಲಿಯೇ ಶೂಟಿಂಗ್ ಮುಂದುವರಿಯುವ ಸಾಧ‍್ಯತೆಯಿದೆ. ಹೀಗಾಗಿ ಈ ಹೊಸ ವರ್ಷವನ್ನು ಶೆಟ್ರು ಕಾಶ್ಮೀರದಲ್ಲಿ ಅವರು ಕಳೆಯಲಿದ್ದಾರೆ. ಇನ್ನು ಚಾರ್ಲಿ 777 ಸಿನಿಮಾದಲ್ಲಿ ರಕ್ಷಿತ್ ಜತೆಗೆ ನಾಯಿ ಕೂಡಾ ಪ್ರಮುಖ ಪಾತ್ರವಹಿಸಿದೆ.