ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ದನದ ಮಾಂಸದ ರಫ್ತು ಶೇ.25ರಷ್ಟು ಹೆಚ್ಚಾಗಿದೆ : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮೈಸೂರು,ಡಿಸೆಂಬರ್,17,2020(..): ಗೋಹತ್ಯೆ ನಿಷೇಧದ ಕಾಯ್ದೆ ಹಿಂದೆ ರಾಜಕೀಯ ಉದ್ದೇಶವಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ನಮ್ಮ ದೇಶದ ದನದ ಮಾಂಸದ ರಫ್ತು ಸುಮಾರು ಶೇ.25 ರಷ್ಟು ಹೆಚ್ಚಾಗಿದೆ. ಇಡೀ ಪ್ರಪಂಚದಲ್ಲೇ ಬೀಫ್ ರಫ್ತಿನಲ್ಲಿ ಭಾರತ ದೇಶ ಎರಡನೇ ಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು. ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಿಂದ ನಿತ್ಯ ಸುಮಾರು 20 ಲಕ್ಷ ಟನ್ ನಷ್ಟು ದನದ ಮಾಂಸ ರಫ್ತಾಗುತ್ತಿದೆ. ದೇಶದ ಪ್ರಮುಖ ದನದ ಮಾಂಸದ ರಫ್ತು ಕಂಪನಿಗಳ ಮಾಲೀಕರು ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯವರಿಗೆ ಗಾಂಧಿ ತತ್ವದಲ್ಲಿ ನಂಬಿಕೆ ಇದ್ದರೆ ಕೂಡಲೇ ಎಲ್ಲಾ ಎಕ್ಸಪೋರ್ಟ್ ಕಂಪನಿಗಳನ್ನು ಮುಚ್ಚಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು. ಮೈಸೂರಿನ ಪಿಂಜರಪೋಲಿನ ವ್ಯವಹಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಂ.ಲಕ್ಷ್ಮಣ್ ಮೈಸೂರಿನ ಪಿಂಜರಪೋಲಿನ ಬಗ್ಗೆ ನಾವು ಮಾತನಾಡಬೇಕಿದೆ. ಅಲ್ಲಿ ಇರುವ ವ್ಯಕ್ತಿ ನಮ್ಮ ರಾಜ್ಯದವನೇ ಅಲ್ಲ. ಅವನು ಗುಜರಾತಿನ ಮಿಥಲ್ ಎಂಬ ವ್ಯಕ್ತಿ. ಅವನು ಬಿಜೆಪಿಯವನು. ಅವನನ್ನೆ ಯಾಕೆ 25 ವರ್ಷಗಳಿಂದ ಅಲ್ಲಿಯೇ ನೇಮಿಸಿದ್ದೀರಿ? ಅಲ್ಲಿ ಇರುವ ದನಗಳ ಬಗ್ಗೆ ಮಾಹಿತಿ ನೀಡಿ. ಅಲ್ಲಿಗೆ ಬರುವ ದನಗಳನ್ನ ಎನ್ ಮಾಡುತ್ತಿದ್ದೀರಿ? ಸುಮಾರು 25 ಸಾವಿರ ದನಗಳು ಇರುವ ಮಾಹಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ತನಿಖೆ ಮಾಡಿಸಿ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡಿ. ನಾವು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಂಪೂರ್ಣವಾಹಿ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಮೈಸೂರಿನ ಪಿಂಜರಪೋಲಿನ ವ್ಯವಹಾರದ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅನುಮಾನ ವ್ಯಕ್ತಪಡಿಸಿದರು. … 25% : . . , . 17, 2020 (..): “ - . 25% . - ,” . , . , 20 . . , ,” . : / . / 20 : -- ---beef25 ----.