ಪೋಸ್ಟ್ ಕೊರೊನಾ ಸಕ್ಸಸ್: 25 ದಿನ ಪೂರೈಸಿದ ಆ್ಯಕ್ಟ್ 1978 ಬೆಂಗಳೂರು, ಡಿಸೆಂಬರ್ 17, 2020 (..):ಪೋಸ್ಟ್ ಕೊರೊನಾ ದಿನಗಳಲ್ಲಿ ಬಿಡುಗಡೆಯಾದ ಚಿತ್ರ ಆ್ಯಕ್ಟ್ 1978 ಯಶಸ್ಸು ಗಳಿಸಿದ ಖುಷಿಯಲ್ಲಿದೆ! ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿದೆ.ಚಿತ್ರದ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ”ನಿಮ್ಮೆಲ್ಲರ ಪ್ರೀತಿ, ನಮ್ಮನ್ನು ಈ ಮೈಲಿಗಲ್ಲು ತಲುಪುವಂತೆ ಮಾಡಿದೆ. ಎಲ್ಲಾ ಪ್ರೇಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳು.” ಎಂದು ಟ್ವಿಟ್ಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.