ಸೋಷಿಯಲ್ ಮೀಡಿಯಾದಲ್ಲಿ ‘ಮದಗಜ’ ರೌದ್ರಾವತಾರ ! ಬೆಂಗಳೂರು, ಡಿಸೆಂಬರ್ 17, 2020 (..):‘ಮದಗಜ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಶ್ರೀಮುರಳಿ ಬರ್ತ್ ಡೇ ಪ್ರಯುಕ್ತ ಚಿತ್ರದ ಟೀಸರ್ ಅನ್ನು ಪ್ರಶಾಂತ್ ನೀಲ್ ಬಿಡುಗಡೆ ಮಾಡಿದ್ದಾರೆ. 1:41 ನಿಮಿಷದ ಈ ಟೀಸರ್‌ನಲ್ಲಿ ವಾರಣಾಸಿಯ ಸುಂದರ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ‘ಮದಗಜ’ ಸಿನಿಮಾದ ಕತೆಯು ಕಾಶಿಯಲ್ಲಿ ನಡೆಯುತ್ತದೆ, ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ಮಾಡಲಾಗಿದೆ.ಮದಗಜ ಸಿನಿಮಾದಲ್ಲಿ ಶ್ರೀಮುರಳಿ ಎದುರು ಆಶಿಕಾ ರಂಗನಾಥ್ ಸ್ಕ್ರೀನ್ ಶೇರ್ ಮಾಡಿದ್ದಾರೆ.ಜಗಪತಿ ಬಾಬು, ಚಿಕ್ಕಣ್ಣ ಸೇರಿದಂತೆ ಹಲವು ನಟರು ಚಿತ್ರದಲ್ಲಿದ್ದಾರೆ.