ಬಿಸಿಎಫ್ ಮನೋಜ್ ಕುಮಾರ್, ಪತ್ರಕರ್ತ ವಿನೋದ್ ಕುಮಾರ್ ನಾಯಕಗೆ ಸನ್ಮಾನ ಚಾಮರಾಜನಗರ,ಡಿಸೆಂಬರ್,17,2020(..): ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಚಾಮರಾಜನಗರ ವಲಯದ ಬಿಸಿಎಫ್ ಮನೋಜ್ ಕುಮಾರ್ ಹಾಗೂ ವನ್ಯಜೀವಿ ಮಂಡಳಿಗೆ ನೂತನ ಸದಸ್ಯರಾಗಿ ನಿಯೋಜನೆಗೊಂಡಿರುವ ಪತ್ರಕರ್ತ ವಿನೋದ್ ಕುಮಾರ್ ನಾಯಕ ಅವರನ್ನು ಮೈಸೂರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಸನ್ಮಾನಿಸಿದರು. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಪಿಸಿಸಿಎಫ್ ಶಿವರಾಜ್ ಸಿಂಗ್, ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಸಂತೋಷ್, ಪತ್ರಿಕಾ ಛಾಯಾಗ್ರಾಹಕರಾದ ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಉದಯಶಂಕರ್. ಹಂಪಾ ನಾಗರಾಜ್, ಪತ್ರಕರ್ತರಾದ ಎಂ.ಟಿ.ಯೋಗೇಶ್ ಕುಮಾರ್, ಅಜಿತ್, ಗುರುಪ್ರಸಾದ್, ಮಹದೇವಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. : - -- --